ನಮ್ಮಲ್ಲಿ ಬಹುತೇಕ ಜನರಿಗೆ ತೂಕ ಹೆಚ್ಚಾಗುತ್ತಿರುವುದೇ ಚಿಂತೆ, ಅದರಲ್ಲಿ ಫಿಟ್ನೆಸ್‌ಗೆ ತುಂಬಾ ಒತ್ತು ನೀಡುತ್ತಿದ್ದವರಿಗೂ ಲಾಕ್‌ಡೌನ್‌ನಿಂದಾಗಿನ ಜಿಮ್, ವರ್ಕೌಟ್ ಸೆಂಟರ್ ತೆರೆದಿಲ್ಲ, ಆದ್ದರಿಂದ ಮೈ ತೂಕ ಹೆಚ್ಚಾಗುತ್ತಿದೆ ಎಂಬ ಚಿಂತೆ ಕಾಡಿದೆ.
ಮನೆಯಲ್ಲಿಯೇ ನಿಯಮಿತವಾದ ವ್ಯಾಯಾಮ ಹಾಗೂ ಆಹಾರಕ್ರಮ ಅಂದರೆ ಡಯಟ್ ಪಾಲಿಸಿದರೆ ಮೈ ತೂಕ ಕಡಿಮೆ ಮಾಡಬಹುದು. ಕೆಲವರು ಡಯಟ್ ಅಂದರೆ ಊಟ ಬಿಡುವುದು ಎಂದು ತಪ್ಪಾಗಿ ಗ್ರಹಿಸುತ್ತಾರೆ. ಆದರೆ ಅದಲ್ಲ, ಆರೋಗ್ಯಕರ ಆಹಾರ ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳುವುದು. ಕೀಟೋ ಡಯಟ್, ಮೆಡಿಟೇರಿಯನ್ ಹೀಗೆ ತೂಕ ಇಳಿಕೆ ಹಲವಾರು ಡಯಟ್ ವಿಧಾನಗಳಿವೆ.
ಆದರೆ ತೂಕ ಇಳಿಕೆಗೆ ನಮ್ಮ ಭಾರತೀಯ ಆಹಾರಶಯಲಿಯೇ ಸಾಕು, ಇಲ್ಲಿ ನಾವು ಯಾವ ಬಗೆಯ ಆಹಾರಶೈಲಿ ರೂಪಿಸಿಕೊಂಡರೆ ತೂಕ ಇಳಿಕೆಗೆ ಸಹಕಾರಿ ಎಂಬುವುದನ್ನು ಹೇಳಿದ್ದೇವೆ ನೋಡಿ: